ಮಳೆ ಬಂದಾಗ ಬೆಂಗಳೂರಿನ ರಸ್ತೆಗಳು ಕೊಚ್ಚೆ ಗುಂಡಿಗಳಗುವದು ಹಳೆಯ ವಿಷಯ. ಆದರೆ ಈಗ ಮಳೆಯಲ್ಲಿ ರಸ್ತೆಗಳು ನದಿಗಳಾಗುತ್ತಿವೆ. ಆ ನದಿಯನ್ನು ದಾಟುತ್ತ ನಾವು ವಾಹನ ಓಡಿಸಬೇಕು ಅಥವಾ ಬಹಳ ಸಲ ತಳ್ಳಬೇಕು. ಯಾರನ್ನು ಬಯ್ಯೋಣ ? ಹುಯ್ಯೋ ಹುಯ್ಯೋ ಮಳೆರಾಯ ಎಂದು ನಾವೆಲ್ಲ ಚಿಕ್ಕವರಿದ್ದಾಗ ಹೇಳಿದ್ದನ್ನು ಮರೆಯದೆ ಈಗ ಹುಯ್ಯುತ್ತಿರುವ ಮಳೆ ರಾಯನನ್ನೇ ? ರಸ್ತೆ, ಚರಂಡಿ ವ್ಯವಸ್ತೆ ಸರಿ ಮಾಡಲು ಸಮಯ ಸಿಗದ ತುಂಬಾ ಮಹತ್ವದ ಕೆಲಸ ಮಾಡುತ್ತಿರುವ ಸರಕಾರವನ್ನೇ? ಅಥವಾ ಇದೆಲ್ಲ ತಿಳಿದೂ ರಸ್ತೆಗೆ ಇಳಿಯುವ ಸಾಹಸ ಮಾಡುವ ನಮ್ಮ ಮೂರ್ಖತನವನ್ನೆ ? ನೀವೇ ಹೇಳಿ