Skip to main content

Posts

Showing posts with the label kannada

ಸಮತೋಲನ

ಇದೊಂದ್ ಶಬ್ದದ ಸಲುವಾಗಿ ನಾನು ಈ ಪೋಸ್ಟನ್ನ ಕನ್ನಡದಲ್ಲಿ ಬರೀಬೇಕಾಗಿ ಬಂತು. ನಂಗೊಂದ್ ಮೆಸೇಜ್ ಬಂತು - ನಿಮ್ಮ ಸಮತೋಲನ ಮತ್ತು ಇತರ ವಿವರಗಳನ್ನ ತಿಳಿಯಲು http:yavudoondutinryurl  ನ್ನು ಕ್ಲಿಕ್ ಮಾಡಿರಿ ಸಮತೋಲನವಾ? ಯಾರಿಗೆ? ಸರೀ ಎಣ್ಣೆ ಹಾಕಿ ಟೈಟ್ ಆದವರಿಗಾ? ಹೇಗೆ ಅವರು ಸಮತೋಲನ ನೋಡ್ತಾರೆ? ಆ ವೆಬ್ ಸೈಟ ಓಪನ್ ಮಾಡಿ ಆಮೇಲೆ ಫೋನ್ ಮೇಲೆ ಒಂದ್ ಕಾಲಲ್ಲಿ ನಿಲ್ಬೇಕಾ? ಹಾಗೆಲ್ಲ ಯಾರೂ ಮಾಡೋದಿಲ್ಲ. ಜನಾ ಅಷ್ಟೆಲ್ಲಾ ದಡ್ದರಲ್ಲಾ. ಫೋನ್ ವಿಷಯದಲ್ಲಂತೂ ಸಿಕ್ಕಾಪಟ್ಟೆ ಸ್ಮಾರ್ಟ್ ಆಗೇ ಇರ್ತಾರೆ. ಅದಲ್ಲ ಅಂದ್ರೆ ಇನ್ನ ಹೇಗೆ ಸಮತೋಲನಾ ನೋಡ್ತಾರೆ? ತಲೆ ಮೇಲೆ ಫೋನ್ ಇಟಗೊಂಡು ಆ ಸೈಟ ಓಪನ್ ಮಾಡಿದ್ರೆ ಅದು ಹೇಳತ್ತಾ - "ನೀವ್  ಹಾಕಿದ ಎಣ್ಣೆ ಎಲ್ಲೋ ಡೂಪ್ಲಿಕೇಟ್ ಇರ್ಬೇಕು. ನೀವ್  ಇನ್ನು ಪೂರ್ತಿ ಓಲಾಡ್ತಾ ಇಲ್ಲ. " ಆದ್ರೆ ಸಮತೋಲನ ನೋಡೋ ಅವಶ್ಯಕತೆ ಇರೋವ್ರಿಗೆ ಸಮತೋಲನದ್ ಮೇಲೆ ಡೌಟ್  ಇರತ್ತೆ. ಅವ್ರು ಯಾವ ಧೈರ್ಯದ ಮೇಲೆ ಅಷ್ಟೆಲ್ಲ ಬೆಲೆ ಬಾಳೋ ಫೋನ್ ತಲೆ ಮೇಲಿಂದ ಬೀಳ್ಸೋಕೆ ರೆಡಿ ಆಗ್ತಾರೆ? ಓ ಕೆ.  ಆ ಮೆಸೇಜು ಬಂದಿದ್ದು ಜಿಯೋದಿಂದಾ. ಅವರು ಹೇಳ್ತಾ ಇರೋ ಸಮತೋಲನ ಇಂಗ್ಲಿಷಿನ ಬ್ಯಾಲೆನ್ಸ್.  ಕರೆನ್ಸಿ ಬ್ಯಾಲೆನ್ಸ್. ಸುಮ್ನೆ ತಲೆ ತಿಂದು ನಿಮ್ಮ ಸಮತೋಲನ ತಪ್ಪಿಸಿ ಬಿಟ್ನಾ? ಸಾರಿ.  

ಕತ್ತಲೆ

ಸುತ್ತ ಮುಟ್ಟಲೂ ಕಪ್ಪು ಕತ್ತಲೆ ಕವಿದಿರಲು ಮುಂದೆ? ಮುಂದೇನು ಇಲ್ಲ ಬರೀ ಕತ್ತಲೆ ಕಪ್ಪು ಕತ್ತಲೆ ಆದಮೇಲೆ ನಸುಗತ್ತಲೆ ಆದ ಮೇಲೆ ಪೂರ್ತಿ ಕತ್ತಲೆ ಬೆಳಕೇ ಇಲ್ಲ ದಾರಿಯೇ ಇಲ್ಲ

ಹಂತಕ

ಓಡಿ ಬಂದು ಅಡಗಿ, ಮುದುಡಿ  ಕುಳಿತು ಕೂಗತೊಡಗಿತು ಮಿಯಾವ್ ಮಿಯಾವ್ ಮಿಯಾವ್ ಏನಾಯಿತು ಬೆಕ್ಕೆ ಯಾಕೆ ಹೆದರಿರುವೆ ನೋಡಲ್ಲಿ ಕ್ರೂರ ನಾಯಿಗಳ ದಂಡ ಬೆನ್ನೆತ್ತಿ ಬಂದು ಕೊಲ್ಲುವವು ನನ್ನ  ಇಲ್ಲಿಲ್ಲ ಇವು ಸಭ್ಯ ನಾಯಿಗಳು ನೀ ಸುಮ್ಮನೆ ಕೂಗಿ ಗಲಾಟೆ ಮಾಡಬೇಡಾ ಇಲ್ಲ ಮನುಜೇ ಇವುಗಳಿಗೆ ಧನ ಮದ ಬಲ ಮದ ತಮಗೆ ಮೇಲಿನ ಬೆಂಬಲವಿದೆಯೆಂಬ ಮದ ದಿಂದ ಕ್ರೌರ್ಯ ಮಿತಿ ಮೀರಿದೆ ನೀ ಸುಮ್ಮನಿರು ಕೂಗಿ ಕೂಗಿ ಸೋತು ಸುಮ್ಮನಾಗುತ್ತಾರೆ ನಾನೆಂದೆ  ನಿನ್ನೆ ನೋಡಿದರೆ ಬೆಕ್ಕು ಅಲ್ಲಾಡದೆ ಬಿದ್ದಿದೆ ನಿರ್ಜೀವಿಯಾಗಿ ಹಂತಕರು  ನಾಯಿಗಳಾ ? ನಾನಾ ?

Mobile home

ನೀವೂ ಒಮ್ಮೆಯಾದರೂ ಗುನುಗುನಿಸಿದ್ದೀರಾ "ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು." ಬೆಟ್ಟ ಆದರೆ ಬೆಟ್ಟ, ಸಾಗರ ತಟವಾದರೆ ತಟ   ಜಪಾನ್ ದೇಶದ ಈ ಮೊಬೈಲ್ ಮನೆ ಯನ್ನು ಬೇಕೆಂದಲ್ಲಿಗೆ  ಒಯ್ದು ಅದರಲ್ಲಿ ಹಾಯಾಗಿ ಉಳಿದು ಬಿಡಿ. ನೆರೆಹೊರೆಯವರ ಕಿರಿಕಿರಿಯಿಲ್ಲದೆ :) ರಾತ್ರಿ ಆಗಸವನ್ನು ನೋಡುತ್ತಾ ಚಂದಿರನ ತಂಗಿಯರ ಹಾಡನ್ನು ಕೇಳುತ್ತ ಮಗುವಿನಂತೆ ನಿದ್ದೆ ಮಾಡಿರಿ.  ಬೇಸರವಾಯಿತೇ ? ಗಂಟು ಮೂಟೆ ಮತ್ತು ಮನೆ (!) ಕಟ್ಟಿಕೊಂಡು ದೂರ, ಬಲು ದೂರ ಹೋಗಿಬಿಡಿ. ನಿಮ್ಮ ಮನೆಯೇ ಇಷ್ಟು ಅಲ್ಟ್ರಾ ಟೆಕ್ ಆದರೆ ನಿಮ್ಮ ವಿಹಾರ ತಾಣ ಇನ್ನು ಹೇಗಿರಬೇಕು!! ಆಲ್ಪ್ಸ್ ಪರ್ವತಗಳಿಗೆ ಹೋಗಿ ಈ ಮೌಂಟೈನ್ ಕ್ಲಿಫ್ ಹೋಟೆಲಲ್ಲಿ ಉಳಿಯಿರಿ . (ಕನಸು ಕಾಣಲು ಯಾರ ಅಡ್ಡಿ ?)
ಇತರರ ಕೆಳ ಬೀಳಿಸಿ ನೀ ಮೇಲೆ ಹೋಗುವದ್ಯಾಕೆ ಅವರ ನಾಶವೇ ನಿನ್ನ ಉನ್ನತಿಯೇ ಅವರ ಗೋರಿಯ ಮೇಲೆ ನಿನ್ನ ಮನೆ ಯಾಕೆ ಯಾಕಿಷ್ಟು ಕ್ರೌರ್ಯ ನಿನದು ತನ್ನಂತೆ ಪರರ ಬಗೆದೊಡೆ ಕೈಲಾಸ ಎಂಬ ಮಾತು ಅರಿಯೆಯಾ

ವ್ಯೂಹ

ಅವಳು ಬಲ್ಲಳು ಅರಿಯು ಯಾರೆಂದು ಬಲ್ಲಲವಳು ಚಕ್ರವ್ಯೂಹವೆಂದು ಹಿಂದೆ ಖಡ್ಗ ಹಿಡಿದು ನಿಂತಿಹರೆಂದು ಸುತ್ತಲಿಹರೆಲ್ಲ ಶತ್ರುಗಳು ಮಿತ್ರರಾ ಆಪ್ತರೆಲ್ಲಿ ಬರೀ ಭ್ರಮೆ ಹೊರಬರಲು ಅಸಾಧ್ಯ ಬರದಿರಲು ಅಂತ್ಯ ಕುಗ್ಗಿ ಕುಬ್ಜವಾಗಿ ಮಾಯವಾಗುವಳವಳು ಆದರಲ್ಲೇ ಇರುವುದು ಅವಳ ನರಕ ಮರು ದಿನ ಮತ್ತೆಲ್ಲ ಮರೆತು ಮರೀಚಿಕೆಯ ಹುಡುಕಿ ಹೊರಟವಳ ಹುಚ್ಚಿಗೇನು ಹೇಳಲಿ
ಅದ್ವೈತವ ನುಡಿದು ಅಹಂಕಾರಿಯಾದೆನಯ್ಯ ಬ್ರಹ್ಮವ ನುಡಿದು ಭ್ರಮಿತನಾದೆನಯ್ಯ ಶೂನ್ಯವ ನುಡಿದು ಸುಖದುಃಖಕ್ಕೆ ಗುರಿಯಾದೆನಯ್ಯ ಗುಹೇಶ್ವರಾ ನಿಮ್ಮ ಶರಣ ಸಾಹಿತ್ಯದಿಂದಾನು ಸದ್ಭಕ್ತನಾದೆನಯ್ಯ       - ಅಲ್ಲಮ ಪ್ರಭು

ನಿರೀಕ್ಷೆ

ಕಣ್ಣು ಮಬ್ಬಾಗಿಲ್ಲ  ಬಾಗಿಲಿಂದ ಕೀಲಿಸುತ್ತಿಲ್ಲ   ಅಷ್ಟೆ ಕಿವಿ ಮಂದವಲ್ಲ  ಫೋನಿನ ಪಕ್ಕ ಕುಳಿತು ಬಿಟ್ಟಿದೆ ಕೈ ನಡುಗುವದಲ್ಲ ಹಬ್ಬದಡಿಗೆ ಮಾಡಲು ಕುಣಿಯುತ್ತಿದೆ ಮಗಾ ನೀನೆಲ್ಲಿ?  ನಿನ್ನ  ಕೂಸು ಮಡದಿಯರೆಲ್ಲಿ?  

ಗೆಲುವಿನ ರೋಧನ

I think I lost my funny bone some where in transit.  To this phase of my life called faint hope? Anyways, this is a piece I wrote many years ago, using actual pen and paper. I think I was stuck some where.  No, this is from pre-blog era, when I was in Muscat. ಪಾಂಚಲೀ, ತಡೆಯಲಿಲ್ಯಾಕೆ ನನ್ನ  ಈ ಕ್ರೂರ ಯುದ್ಧ ಮಾಡದಂತೆ? ಬೇಕಿರಲಿಲ್ಲ ನಮಗೀ ರಾಜ್ಯ  ಹೋಗಲಾರೆ ರಸ್ತೆಯಲಿ  ರುಂಡ ಮುಂಡ ಕೈ ಕಾಲುಗಳು  ಕೂಗುತ್ತಿವೆ  ಮಹಾರಾಜ ಎಲ್ಲಿ ನಮ್ಮ ಪ್ರಾಣ  ಕೂರಲಾರೆ ಸಿಂಹಾಸನದಲಿ  ಮುತ್ತಜ್ಜನ ಶಯ್ಯೆಯ ಬಾಣಗಳು ಚುಚ್ಚುತ್ತಿವೆ   ಯಾರೋ ಅಳುತ್ತಿದ್ದಾರೆ  ಅಮ್ಮ ನೋವೂ  ತುತ್ತು ಅನ್ನ ಉಣಲಾರೆ  ಅಪ್ಪ ನನಗೂ ಎನ್ನುವ ಮಕ್ಕಳು  ಎಲ್ಲಿ ಎಲ್ಲಿ ? ಬರೀ ಭ್ರಮೆ  ಭೀಮಾರ್ಜುನರ ಬಳಿ ಹೋಗಲಾರೆ  ಅವರ ದೀನ ನಿಶ್ಶಬ್ದ ಅಳಲು  ನಮ್ಮ ಮಕ್ಕಳೆಲ್ಲಿ ಅಣ್ಣಾ  ಹದಿನೆಂಟು ಅಕ್ಷೋಹಿಣಿ ನಿಷ್ಪಾಪಿಗಳ  ಹತ್ಯೆಯ ಪಾಪ  ತೊಳೆಯಲಿ ಯಾವ ಗಂಗೆಯಲಿ ? ನೀನ್ಯಾಕೆ ತಡೆಯಲಿಲ್ಲವೇ  ಪಾಂಚಾಲಿ  ಈ ಕ್ರೂರ ನರಹತ್ಯೆಯ ?  
ಈಗ ೨೦ ವರ್ಷಗಳ ಹಿಂದೆ ಹೀಗೆ ಇರಲಿಲ್ಲ. ನಾನು ಬೆಂಗಳೂರಿಂದ   ನಮ್ಮೂರಿಗೆ ಹೋದರೆ ಬೇರೆಯದೇ ವಿಶ್ವ ಕಾದಿರಿತ್ತಿತ್ತು. ಗಂಡಸರು ಜಗುಲಿಯಲ್ಲಿ ಲೋಡಿಗೆ  ಸಾದಿ ಕೂತು ಬಾಯಿ ತುಂಬಾ ಕವಳ ತುಂಬಿಕೊಂಡು ಮಾತಾಡುತ್ತ ಅಥವಾ ಇಸ್ಪೀಟ್ ಆಡುತ್ತ ಆಗಾಗ ಹೆಂಡತಿ / ತಾಯಿ/ತಂಗಿ  ಬೆಳಿಗ್ಗೆ ತಾನೇ ಚೊಕ್ಕ ಮಾಡಿದ ಕಡಬಾರಕ್ಕೆ ಪಿಚಕ್ಕೆಂದು ಕವಳ ತುಪ್ಪಿ ಬರುತ್ತಾ ಇದ್ದರು. ಹೆಂಗಸರು ಅರೆ ಕತ್ತಲೆ ಅಡಿಗೆ ಮನೆಯಲ್ಲಿ ಸೌದೆ ಒಲೆಯನ್ನು ಊದಿ ಊದಿ ಸೋತು ೨ ಫೂಟು ಅಗಲದ ಒರಳಿನಲ್ಲಿ ಕಾಯಿ ರುಬ್ಬುತ್ತ , ಹಾಳಾಗಿರುವ ಮಿಕ್ಸರನ್ನು ಬಯ್ಯುತ್ತ, ೮ ಗಂಟೆ ಮಾಯವಾಗುವ ಕರೆಂಟನ್ನು ಬಯ್ಯುತ್ತ ಒಲೆಯ ಮೇಲಿನ ಅನ್ನದ ಚರಿಗೆಯನ್ನು ನೋಡುತ್ತಾ ಇರುತ್ತಿದ್ದರು. ಮಕ್ಕಳು ಜಗುಲಿಗೆ ಹೋಗಿ ಏನೋ ಹೋಳಿ ಮಾಡಿ ಅಪ್ಪನ ಹತ್ರ ಬೈಸಿಕೊಂಡು ಒಳಗೆ ಬಂದು ಹಶವು ಎಂದು ಅಮ್ಮನ ಹತ್ರ ಹೊಡೆಸಿಕೊಂಡು ಅಂಗಳಕ್ಕೆ ಹೋಗಿ ಅದಕ್ಕೂ ಬೈಸಿಕೊಂಡು ಅಳುತ್ತ ಪುಸ್ತಕ ಹಿಡಿದು ಕೂರುತ್ತಿದ್ದರು. ಕಾರ್ಯ (ಮದುವೆ , ಉಪನಯನ ಇತ್ಯಾದಿ ) ಮನೆಗಳಲ್ಲಿ ಕಾಣುವ ದ್ರಶ್ಯವೂ ಚೆನ್ನಾಗಿತ್ತು. ಹೆಂಗಸರು ತುಂಬಾ ಹತ್ತಿರದ ಮದುವೆಯಾದರೆ ತಮ್ಮ ಮದುವೆಯಲ್ಲಿ ಗಂಡನ ಮನೆಯಲ್ಲಿ ಕೊಟ್ಟ ರೇಷ್ಮೆ ಸೀರೆ ಉಟ್ಟು, ಇಲ್ಲವಾದರೆ ಇದ್ದದ್ದರಲ್ಲೇ ಹೊಸದಾದ ಸೀರೆ ಉಟ್ಟು, ಅದಕ್ಕೆ ಬಿಳಿಯದೋ, ಕರಿಯದ್ದೋ ಬ್ಲೌಸ್  ತೊಟ್ಟು, ಅತ್ತೆ ಕೊಟ್ಟರೆ ವಟಾಣಿ ...

ಬ್ರಷ್ಟ ಪ್ರಭುತ್ವ?

ಪ್ರಜಾ ಪ್ರಭುತ್ವವೆಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳು ನಡೆಸುವ ಸರಕಾರ ಎಂದು ನಾವೆಲ್ಲಾ ಕನ್ನಡ ಶಾಲೆಯಲ್ಲಿ ಕಲಿತಿದ್ದೆವು. ಈಗ ಅದೆಲ್ಲ old school. ಪ್ರಜಾ ಪ್ರಭುತ್ವದ ಹೊಸ ಪರಿಭಾಷೆಯೆಂದರೆ ಬ್ರಷ್ಟರಿಂದ ಆಯ್ಕೆಯಾಗಿ ಬ್ರಷ್ಟರಿಗಾಗಿ ಬ್ರಷ್ಟರು ನಡೆಸುವ ಸರಕಾರವೇ ಪ್ರಜಾ ಪ್ರಭುತ್ವ ಅಥವಾ ಬ್ರಷ್ಟ ಪ್ರಭುತ್ವ  Cliches aside, I saw in today's newspaper that chief election officer has stated that taking money for vote is an offense. But what about buying vote? Is it not an offense?   We citizens will supply them with names of candidates who are giving money. Will the honorable government  punish the politicians who are giving money for their votes? Or will the election commission cancel their candidature for this election?

My Bharatha - Bheeshma

I tried searching for inspiration using stumbleupon , but not closing blogger window. That is real optimism. But inspiration does not work that way. OK. Let me post some thing from my old note book. ನವಜಾತ ಶಿಶುವ ಹೊಳೆಗೆಸೆದ  ಅಮ್ಮ ನೂ ಅಪ್ಪನೂ ಆಗಿ ಸಾಕಿದ ತಂದೆಯೂ ತನ್ನಷ್ಟೇ ಎತ್ತರದ ಮಗನೆದುರು ಪ್ರೇಮ ರೋಗವೆಂದು ಅಳಲಿದಾಗ ಏನು ಮಾಡಬೇಕಿತ್ತು ಈ ದೇವವ್ರತ ಭೀಷ್ಮನಾಗದೇ ? ತೊಟ್ಟ  ಭೀಷ್ಮ  ಶಪಥವ  ಹೊಗಳಿದಾಗ ಎದೆಯುಬ್ಬಿತ್ತು  ಇಂತಹ   ತ್ಯಾಗಿ  ಮನೋ ನಿಗ್ರಹಿ  ಇರಬಲ್ಲರೆ ?  ಅರಿಯದ   ಮುಗುದ  ಮಕ್ಕಳ  - ಅಪ್ಪನ  ಮಕ್ಕಳ ಸಾಕಿ  ಸಲಹಿದೆ  ರಾಜ ಕುವರಿಯರ ಗೆದ್ದು  ತಂದು  ಅವರ  ಮದುವೆಯ  ಮಾಡಿದೇ   ಫಲ ಅಂಬೆಯ ಶಾಪ    ಇಂದು  ಅವರ  ಮೊಮ್ಮಕ್ಕಳು ಒಬ್ಬರನ್ನೊಬ್ಬರು  ಕೊಲ್ಲಲು  ಹೊರಟಾಗ ಕಣ್ಣೀರು  ಹೊರಬಾರದು  ಬಾರದಿರದು  ಇವರ ಪ್ರಶ್ನಿಸಲು ನಾನಿವರ ಅಜ್ಜನೆ? ಅಲ್ಲ, ಇವರು ನನ್ನ   ಸಂತಾನವಲ್ಲ. ಅಖಿಲ ಜೀವ  ಜನ್ತುಗಳೆಲ್ಲ  ಸಂತಾನಕ್ಕಾಗಿಯೇ  ಬದುಕಿ    ಸಾಯುವಾಗ ಯಾವ ಸಾರ್ಥಕತೆಗೆ ಈ ಪ್ರತಿಜ್ಞೆ...

ಯುಗಾದಿಯ ಹರಟೆ

ಇವತ್ತು ಸ್ವಲ್ಪ ಬಿಸಿ ದಿನ. ಅದರಲ್ಲಿ ಹೊಸತೇನು . ಈ ವರ್ಷದ ಬೇಸಗೆ ಸಿಕ್ಕಾಪಟ್ಟೆ  ಬಿಸಿಲು , ತಡೆಯಲಾರದ ಸೆಕೆ ಅಂದಿರಾ . ನಾನು ಹೇಳಿದ್ದು ಆ ಬಿಸಿಯಲ್ಲ. ಇಂಗ್ಲಿಷ್ ಬಿಸಿ. ವರುಷ ಆರಂಭವಾಗುವ ಯುಗಾದಿ ಹಬ್ಬವಲ್ಲ.  ಪೂಜೆ, ವಿಶೇಶ ಅಡಿಗೆ ಎಲ್ಲ ಕೆಲಸವಿರುತ್ತದೆ. ಪ್ರತಿ ದಿನದಂತೆ ಅರ್ಧ ಗಂಟೆಯ ಅಡಿಗೆ ಅಲ್ಲವಲ್ಲ. ಹೋಳಿಗೆಯಿಂದ ಶುರು ಮಾಡಿ ಉಂಡೆಯವರೆಗೆ ತಯಾರಿಸಿ ಜೊತೆಗೆ ಮಾಮೂಲಿ ಅನ್ಬೊಡೆ, ಕೋಸುಂಬರಿ, ಪಲ್ಯ ಎಲ್ಲ ತಯಾರಿಸಿ ದೇವರಿಗೆ ತೋರಿಸಿ ನಾವು ತಿನ್ನುವ  ಸಂಭ್ರಮ . ಎರೆಡೆರಡು ಸಿಹಿ ತಿಂಡಿಯ ಯುಗಾದಿಗೆ ಎಂದು ಆಶ್ಚರ್ಯವೇ? ಒಂದಕ್ಕಿಂತ ಹೆಚ್ಚು ಸಿಹಿ ಮಾಡಲು ಇದೇನು ಚೌತಿ ಹಬ್ಬವೇ? ತಿಂಡಿ ಪೋತ ಗಣೇಶನ ಹಬ್ಬಕ್ಕೆ ನಾನೂ ಸಹ (ಜಗತ್ತಿನಲ್ಲೆಲ್ಲ ಅಗ್ರಗಣ್ಯ ಆಲಸಿಯಾದ ನಾನೂ ಸಹ) , ಕನಿಷ್ಟ ಐದು ಸಿಹಿ ತಿಂಡಿ ಮಾಡುತ್ತೀನೆ. ಹದಿನಾರು ಪ್ರಕಾರದ ತಿಂಡಿ ಮಾಡುವರೂ ಇರುತ್ತಾರೆ. ಪಾಪದ ಗಣೇಶ! ಎರೆಡೆರಡು ಸಿಹಿ ಮಾಡಲಿಲ್ಲ. ಹೋಳಿಗೆ ಆರಂಭ ಮಾಡಿ ಅದು ಕ್ರಾಶ್ ಆಗಿ, ಡಿಬಗ್ ಮಾಡಲು ಹೋಗಿ, ಸಾಧ್ಯವಾಗದೆ ಮಾಡ್ಯುಲನ್ನೇ  ಬದಲಾಯಿಸಿದೆ. ದುರದ್ರಷ್ಟವಾಷತ್ ಅಡಿಗೆ ಮನೆಯಲ್ಲಿ ಬ್ರೇಕ್ ಪಾಯಿಂಟ್ ಹಾಕಿ ಸ್ಟೆಪ್ ಬಾಯ್ ಸ್ಟೆಪ್ ಎಕ್ಷಿಕ್ಯುಶನ್ ಸಾಧ್ಯವಿಲ್ಲವಲ್ಲ . ಅಲ್ಲ, ನನ್ನ ಮತ್ತು ಅಡಿಗೆ ಮನೆಯ ರಿಲೇಶನ್ ಅಷ್ಟಕ್ಕಷ್ಟೇ  ಎಂದು ಗೊತ್ತಿದ್ದೂ ಪ್ರೊ ಗಳು ಮಾಡುವ ಹೋಳಿಗೆ ಯಾಕೆ? ...

ನಾವು ಕನ್ನಡಿಗರು. ಕನ್ನಡ ಮಾತ್ರ (ಓದಲ್ಲ)

ನಮ್ಮ ನಡುವಳಿಕೆ ಬಹಳ ಸಿಂಪಲ್. ಅಗಸ್ಟ್ 15ಕ್ಕೆ ನಾವು ದೇಶ ಭಕ್ತರು. ನವೆಂಬರ್ 1ಕ್ಕೆ ಕನ್ನಡ ಅಭಿಮಾನಿಗಳು. ಉಳಿದೆಲ್ಲ ದಿನ ನಾವು wannabe ಅಮೆರಿಕನ್ನರು. ನಿನ್ನೆ ಅಮ್ಮನ ಜೊತೆ ವಾದ ಮಾಡುವಾಗ ಹೇಳಿದೆ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯ ಶ್ರೀಮಂತವಾಗಿದೆ. ಅಮ್ಮನದು ಯಾವಾಗಲು ಕಂಪ್ಲೇಂಟ್ ನಾನು ಕನ್ನಡ ಓದುವದಿಲ್ಲ. ಬರೆಯುವದಿಲ್ಲ. ಹೌದು. ಇಂಗ್ಲಿಷ್ ಭಾಷೆ ಶ್ರೀಮಂತ ಭಾಷೆ. ನಮ್ಮದು ಅಷ್ಟೊಂದು ಶ್ರೀಮಂತವಲ್ಲ. ಹೇಗಾದೀತು. ನಾವು ನೀವು ಎಲ್ಲ ವರ್ಷಕ್ಕೆ ಒಂದು ದಿನ ಮಾತ್ರ ಕನ್ನಡವನ್ನು ನೆನಪಿಸಿಕೊಳ್ಳುವವರು. ನಮಗೆ ಕನ್ನಡದ ಪುರಾತನ ಸಾಹಿತ್ಯದ ಬಗ್ಗೆಯಾಗಲೀ, ಸಮಕಾಲೀನ ಸಾಹಿತ್ಯವಾಗಲೀ ಎಷ್ಟು ಗೊತ್ತು? ಒಂದು ಕಾರಂತರು, ಒಂದು ಬೇಂದ್ರೆ ಬಿಟ್ಟರೆ ಬೇರೆ ಯಾರೂ ಗೊತ್ತಿಲ್ಲ. ಇನ್ನು ರನ್ನ, ಪಂಪ, ಕುಮರವ್ಯಾಸರೋ, ಕನ್ನಡ ಶಾಲೆಯಲ್ಲೇ ವಿದಾಯ ಹೇಳಿಸಿಕೊಂಡರು. ಓದುವವರು, ಬರೆಯುವವರು ಇದ್ದರೆ ತಾನೇ ಸಾಹಿತ್ಯ ಬೆಳೆಯುವದು, ಬದುಕುವದು? ನಮ್ಮ ತಲೆಮಾರೇ  ಹೀಗೆ ಹೇಳಿದರೆ ನಮ್ಮ ಮಕ್ಕಳೋ ಕನ್ನಡವನ್ನು ಹೆಕ್ಕಿ ಹೆಕ್ಕಿ ಕಷ್ಟ ಪಟ್ಟು ಓದುತ್ತಾರೆ. BMTC ಬೋರ್ಡ್ ಗಳನ್ನು ಓದಲೂ ಕಷ್ಟ. ಕನ್ನಡ ಒಂದು ವಿಷಯವಾಗಿ ಕಲಿತದ್ದಕ್ಕೆ ಇಷ್ಟಾದರೂ ಬರುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು. ಮತ್ತೇನೂ ಇಲ್ಲ. ಮುಂದಿನ ವರ್ಷ ನವೆಂಬರ್ 1ಕ್ಕೆ ಮತ್ತೆ ಕನ್ನಡ ನಮ್ಮ ಮಾತೃ ಭಾಷೆಯೆಂದು ನೆನೆಸಿಕೊಂಡು ಸ್ವಲ್ಪ ಮೊಸಳೆ ಕಣ್ಣೀರು  ಸುರ...

ಪೂಜ್ಯ

Background: In kannada language pujya also means zero. At least it used to be when I was a school going kid. ಟಿವಿ  ಯಾವುದೊ ಒಂದು ಕನ್ನಡ ಸಿನೆಮಾವನ್ನು ಒರಲುತ್ತಿತ್ತು. ನಾನು star world ಬಿಟ್ಟು ಯಾವಾಗಿಂದ ಕನ್ನಡ ಟೀವಿ ನೋಡತೊಡಗಿದೆ ಎಂದು ಕೇಳಬೇಡಿ. ನಾನು ಕನ್ನಡ ಸಿನೇಮ ನೋಡುವದಿಲ್ಲ. ಕನ್ನಡ ಪುಸ್ತಕ ಅಷ್ಟೊಂದು ಓದುವದಿಲ್ಲ. ಅದರರ್ಥ ನನಗೆ ನಮ್ಮ ಭಾಷೆಯ ಮೇಲೆ ಅಭಿಮಾನ ಇಲ್ಲವೆನ್ದೆಲ್ಲ.   ಕನ್ನಡ ಕೀ ಬೋರ್ಡ್ ಪ್ರೋಗ್ರಾಮ್ ಬರೆದವಳಲ್ಲವೇ? ಆದರೆ ನಮ್ಮವರು ಕನ್ನಡದ ಪರಮ ಭಕ್ತರು. ಅಣ್ಣಾ ವರ ಸಿನೆಮಾಗಳನ್ನು ಎಷ್ಟು ಸಾರಿ ನೋಡಿದರೂ ಅವರಿಗೆ ಸಮಾಧಾನವಿಲ್ಲ. ಎಷ್ಟೆಂದರೆ ನನಗೆ ಆ ಡಯಲಾಗ್ಗಳು ಕಂಠಪಾಠ ವಾಗಿವೆ. ಹಾಗಾಗಿ ಟಿವಿ ಕನ್ನಡ ಸಿನಿಮಾವನ್ನು ಒರೆಯುತ್ತಿತ್ತು.  ಕೋಪದಿಂದ ರಾಜಕುಮಾರ್ ಯಾರನ್ನೋ ಕೇಳುತ್ತಿದ್ದ. "ಪೂಜ್ಯರೇ......". ನನ್ನ  ಮರ್ಕಟ ಬುದ್ಧಿ ಯಾವಾಗಲು ಪೂಜ್ಯ ಎಂದರೆ ಗಣಿತದ ಪೂಜ್ಯವನ್ನೇ ನೆನೆಸಿಕೊಳ್ಳುತ್ತದೆ. ರಾಜಕುಮಾರ ಈ ಮಾತನ್ನು ಹೇಳುವಾಗ ಮತ್ತೊಬ್ಬನ ಹೊಟ್ಟೆಯ ಕಡೆ ನೋಡುತ್ತಿದ್ದನೆ ಅಥವಾ ತಲೆಯ ಕಡೆ ನೋಡುತ್ತಿದ್ದನೆ ? ಹಾಗೆ ನೋಡಿದರೆ ಪೂಜ್ಯರೆಲ್ಲ ಗಣಿತದ  ಪೂಜ್ಯರೇ ? ಗುರು ಹಿರಿಯರು? ತಪ್ಪು ತಪ್ಪು. ಗುರು ಹಿರಿಯರ ಬಗ್ಗೆ ಹಾಗೆ ಹೇಳುವದು sacrilegious. ಅದೇ ನಮ್ಮ ಮಕ್ಕಳ ದ್ರಷ್ಟಿಯಲ್ಲಿ ನಾವೆಲ್ಲಾ ಗಣಿತದ...

ಒಗಟು

ಇದು ಕನ್ನಡದ ಒಂದು ಒಗಟು. ಅಮ್ಮ ಹೇಳಿಕೊಟ್ಟಿದ್ದು. ನೋಡಿ ಬಿಡಿಸಲು ಆಗುವುದೋ ಎಂದು. ಉತ್ತರೆಯ ತಾಯ ತಮ್ಮನ ಕತ್ತಲೆಯಲಿ ಒತ್ತಿ ಕೊಂದವನ ಅಗ್ರಜನ ಪಿತನ ವಾಹನದನ್ತಿರ್ಪವನೆ !!! Hint : you must know your Mahabharatha well. One more. ಹರನ ಹಾರನ ಆಹಾರನ ಸುತನ ದೇವನ ಮಡದಿಯಂ ಕದ್ದೊಯ್ದವನ ಅನುಜನ ಮಡದಿಯೆನಗೊಲಿದಿರ್ಪಳ್ P.S. : If you find the solution, you can mention it in the comment :) Since no one came up with solutions, let me mention them. Uttara's mother's younger brother is Keechaka. The one who killed him in darkness is Bheema. His agraja - elder brother - is Dharmaraya. whose pita - father is Yama. Yama's vahana is buffalo. So the ogatu, is to call some one a buffalo. Second one is Hara's garland - haara is snake, Snake's food is Vaayu - air. Vaayu's son is Hanuman. His god is Rama. The person who kidnapped Rama's madadi - wife - is Ravana. Ravana's anuja is Kumbhakarna. His wife is Nidra - sleep. So all this just to say I am sleepy.

ಅನುಕೂಲ ವೇದಾಂತ

ಈ ಶಬ್ದಕ್ಕೆ ವೇದಾಂತವನ್ನು ನಮ್ಮ ಅನುಕೂಲಕ್ಕೆ ತಕ್ಕ ಹಾಗೆ ತಿರುಚಿಕೊಳ್ಳುವುದು ಎಂಬ ಅರ್ಥ. ಆದರೆ ಇನ್ನೂ ಒಂದು ಅರ್ಥ ಆಗಬಹುದಲ್ಲ. ಅನುಕೂಲ ಪರಿಸ್ತಿತಿಯಲ್ಲಿ ವೇದಾಂತ ಹೇಳುವುದು. ಮಿಕ್ಕಿದ್ದಂತೆ ನಮ್ಮ usual self(ish) ಆಗಿ ಇರುವದು. ಈಗ ನೋಡಿ charity ಎಂದೋ, ವರ್ಲ್ಡ್ ಫುಡ್ ಪ್ರೋಗ್ರಾಮ್ ಎಂದೋ ಓದಿದ್ದೆ ಓದಿದ್ದು ಕೊರೆದಿದ್ದೆ ಕೊರೆದಿದ್ದು. ಆಮೇಲೆ ಕೆಲಸದ ಮುದಿ ಯಮ್ಮ ಹುಷಾರಿಲ್ಲ ಎಂದು ಎರಡು ದಿನ ಬರದಿದ್ದರೆ ಅವಳ ಸಂಬಳದಲ್ಲಿ ದುಡ್ಡು ಹಿಡಿದುಕೊಂಡು ಕೊಡುವದು. ಗಂಡ ಅವನ ತಂಗಿಯ ಮಗನಿಗೆ ಒಂದು ಸಾವಿರಾರು ರೂಪಾಯಿಯ ಉಡುಗೊರೆ ಕೊಡುತ್ತಾನೆ ಎಂದರೆ ಅದಕ್ಕೆ ರಂಪ ಮಾಡುವದು. ಅಷ್ಟಲ್ಲದೇ ನಮ್ಮ ಹಿರಿಯರು ಹೇಳುತ್ತಿದ್ದರೆ - ಸಾಸ್ತ್ರ ಹೇಳಾಕೆ ಇರ್ತೈತೆ ಬಾನ ಉಂಬಾಕೆ ಇರ್ತೈತೆ ಎಂದು.  ಆದರೆ ನಿಜವಾಗಿಯೂ ಈ ವೇದ, ವೇದಾಂತ ಪುರಾಣದಲ್ಲಿ ಇರುವದಾದರು ಏನು. ಬರಿ ದೇವರೇ ನನಗೆ ಇದನ್ನು ಕೊಡು, ಅದನ್ನು ಕೊಡು, ನಿನಗೆ ನಾನು ಎರಡು ತೆಂಗಿನಕಾಯಿ ಒಡೆಯುತ್ತೇನೆ, ಮೂರು ಪ್ರದಕ್ಷಿಣೆ ಹಾಕುತ್ತೇನೆ ಎನ್ನುವ ಲೇವಾ - ಲೇವಿಯೇ ? (ಅಲ್ಲ, ಅದರಲ್ಲೂ ಮೋಸ, ದೇವರು ನಮ್ಮ ಪ್ರದಿಕ್ಷಿಣೆ ತೆಗೆದು ಕೊಂಡು ಮಾಡುವದಾದರೂ ಏನು. ಆ ಒಡೆದ ತೆಂಗಿನ ಕಾಯಲ್ಲಿ ಒಂದು ಹೋಳಾದರು ಅವನಿಗೆ ಸಿಗುವುದೇ) ಅಥವಾ ನೀನೆ ಇಂದ್ರ, ನೀನೆ ಚಂದ್ರ, ನಿನ್ನ ಬಿಟ್ಟು ಇನ್ಯಾರು ಇಲ್ಲ ಎಂಬ ಮುಖ ಸ್ತುತಿಯೇ? ಹೀಗೆಲ್ಲ ವಿಶ್ಲೇಷಣೆ ಮಾಡಿ ಪೂಜೆ ಪುನಸ್ಕಾರಗಳ ಅರ್ಥವನ್ನೇ...

ardhangi

ನಿನಗದೇ ಲಭ್ಯ ಯಾರಿಗೂ ಬೇಡದ ಹಳೆಯ ಹರಕಲು ಅರ್ಧ ಅಂಗಿ ತೇಪೆ ಹಾಕಿದಂತೆಲ್ಲ ಹರಿಯುವ ಅರ್ಧ ಅಂಗಿ

ನಮಗೂ ಐಪ್ಯಾಡ್

ಏನಪ್ಪಾ ನಮಗೆಲ್ಲ ಗವರ್ಮೆಂಟು ನಲವತ್ತೈದು ಸಾವಿರ್ ರುಪಾಯಿದು ಒಂದೊಂದು ಐಪ್ಯಾಡ್   ಕೊಡತೈತಂತ್ ನೋಡ್. ಐಪ್ಯಾಡ್ಅಂದ್ರ ವಿಮಾನದಾಗ ಕಣ್ಣ ಮುಚಗೊಳಾಕಂತ  ಪಟ್ಟಿ ಕೊದತಾರಲ್ಲ.  ಅದ ಏನು ? ಅದಕ್ಯಾಕ ಅಷ್ಟೊಂದು ರೊಕ್ಕಂತ ? ಆ ಐ ಅಲ್ಲಪ  ಇದು . ಕಣ್ಣ ಐ ಅಲ್ಲ. ಇದು ನಾನ್ ಅಂತಾರಲ್ಲ ಆ ಐ . ಹಂಗಾದ್ರ ಇಡಿ ಮೈಗ ಪ್ಯಾಡ್ ಏನು? ಬುಲ್ಲೆಟ್ ಪ್ರೂಫ್ ಅಂಗಿ ಹಂಗ ? ಹಂಗಲ್ಲಪ. ಐಪ್ಯಾಡ್ ಅಂದ್ರ ಒಂದು ಸಣ್ಣ ಕಂಪ್ಯೂಟರ್ ಇದ್ದಂಗ ಇರತೈತಿ  . ಆದ್ರ ಮೊಬೈಲ್ನಂಗ  ಸಣ್ಣ ಇರತೈತಿ. ಕಂಪಯುಟೆರೆನು? ಚಲೋ ಅತು ಬಿಡು. ನನ್ನ ಮನಯಾಕಿ ಬರಿ ಗಲಾಟಿ ಹಚ್ಚಿದ್ಲು. ಲೇಡಿಸ್ ಕ್ಲಬ್ಬನಾಗ್ ಎಲ್ಲಾರು ಈಮೇಲು ಆಮೇಲು ಅಂತ ಮಾತಾಡ್ಕೋತ ಇರ್ತಾರ. ನಾನು ಆ ಈಮೇಲು ನೋಡಕ್ ಒಂದ್ ಚಲೋ ಕಂಪಯುಟರ್  ತಂದ ಕೊಡ್ರಿ. ಅಂತ.  ಇದನ್ನು ಆಕಿಗ ಕೊಟ್ರ ಅತು. ಏ ಹಾಂಗ್ ಮಾಡಬ್ಯಾಡಪ್ಪ. ಇದ ಕೊಡ್ತಾ ಇರೋದು ನಿನ ಹೆಂಡತಿಗ, ಮಕ್ಕಳ್ಗ ಅಲ್ಲ. ನಿನ್ನ ಸ್ವಂತ ಉಪಯೋಗಕ್ಕ.  ನೀನು ಸಭೆಯಾಗ ಮಾತಾಡಾಕ್, ಇದರಾಗ ಬರಕೊಂಬಂದು  ಓದಕ ಅಂತ . ಮತ್ತ ಅದರ ಟೆಂಡರ್  ಯಾರಿಗ ಬರತೈತಿ  ಸ್ವಲ್ಪ ಹೋಗಿ ವಿಚಾರಿಸೋಣೇನು ? ಸ್ವಲ್ಪ ಸುಮ್ಮಿನಿರು ಮಾರಾಯ ನೀನು. ಈಗ್ಲ ಪರಪ್ಪನ ಅಗ್ರಹಾರದಾಗ್ (bangalore prison) ನಮ್ಮ ಮಂದಿ ಕ್ಯೂ  ಹಚ್ಯಾರ . ನಾವೂ ಅಲ್ಲಿಗ್ ಹೋಗೋ ಕೆಲಸ ಬ್ಯಾ...

Kannada where is it?

   ಒಂದೆರಡು ಕನ್ನಡ ಪುಸ್ತಕಗಳನ್ನು ಕೊಳ್ಳೋಣ ಎಂದುಕೊಂಡೆ. ಗೂಗಲ್ ಮಾಡಿದೆ ೨೦೧೦ ಬೆಸ್ಟ್ ಸೇಲ್ಲೆರ್ಸ್ ಕನ್ನಡ ಬೂಕ್ಸ್.  ಸರಿಯಾದ ಉತ್ತರ ಸಿಗಲಿಲ್ಲ. ಕನ್ನಡ ಪುಸ್ತಕ ಗೂಗಲ್ ಮಾಡಿದೆ. ಆದರೂ ಸಿಗಲಿಲ್ಲ. ಯೋಲೋಪ್ ಎಂಬ ಒಂದು ಸೈಟ್ ಸಿಕ್ಕಿತು.  ಅಸ್ಟೇ. ಕನ್ನಡ ನಾಡಿನಲ್ಲಿ ಕನ್ನಡ ಪುಸ್ತಕ ಓದುವವರೇ ಇಲ್ಲವೇ. ಅಥವಾ ಕನ್ನಡದವರೆಲ್ಲ ನಮ್ಮ ಹಾಗೆ ಇಂಟರ್ನ್ಯಾಷನಲ್ ಬೆಸ್ಟ್ ಸೇಲ್ಲೆರ್ಸ್ ಮಾತ್ರ ಓದುತ್ತಾರೆಯೇ . ನಿಜಕ್ಕೂ ಇದು ಶೋಚನಿಯ ವಿಷಯ. ಫಾಸೆಬೂಕ್ ನಲ್ಲಿ  ನೋಡಿದೆ. (ಹಂ ನಾನು ಈಗ ಫಾಸೆಬೂಕ್ ಉಪಯೋಗಿಸುತ್ತೇನೆ. ಗೇಮ್ಸ್ ಆಡಲು. ಇದು ಕೂಲಾ ಅಥವಾ ಫೂಲಾ? ) ಒಂದು ಒಳ್ಳೆಯ ಯುಸೆರ್ ಸಿಕ್ಕಿತು. http://www.facebook.com/Ganchalibidi.Kannadamathadi ಚೆನ್ನಾಗಿದೆ. ನೋಡಿ. ಇನ್ನು ಮುಂದೆ ನೀವು ನಾವೆಲ್ಲ ಕನ್ನಡ ಓದಿ ಕನ್ನಡ ಬರೆದು ಕನ್ನಡದಲ್ಲೇ ಮಾತೊಡೋಣ. ಸರಿಯ?