ವೆಲ್ ಮಕ್ಕಳ ಶಾಲಾ ನಿಬಂಧವಲ್ಲ. ಈ ಬೆಂಗಳೂರಿನಲ್ಲಿ ಅಕಾಲವ್ರಷ್ಟಿ ಏಕೆ ಎಂಬ ಒಂದು ಜಿಜ್ಞಾಸೆ. ಬೆಳಗೊಂದಾದ ತಕ್ಷಣ ಈ ದ್ವಿಚಕ್ರಿಗಳು, ತ್ರಿಚಕ್ರಿಗಳು, ಚತುಶ್ಚಕ್ರಿಗಳು, ಪಂಚಚಕ್ರಿಗಳು ಓ ಸಾರೀ ಶತ್ಚಕ್ರಿಗಳು ಎಲ್ಲ ಜುಯ್ಯೆಂದು ಹೋಗುತ್ತಾ ಇರುತ್ತಾರೆ. ಆಸ್ ಇಫ್ ಈ ದಿನ ನಿತ್ಯದ ತಿರುಗಾಟವನ್ನು ಎಂಜಾಯ್ ಮಾಡುತ್ತಿದ್ದರೇನೋ. ಈ ಜಗತ್ತಿನ ಯಾವ ಪರಿವೆಯೂ ಇಲ್ಲೆವೇನೋ ಎಂಬಂತೆ. ಸರಿ ಇವರಿಗೆ ಬುದ್ದಿ ಕಲಿಸೋಣ ಎಂದು ಆ ದೇವರು ವರುಣನ ಸಹಾಯ ತೆಗೆದುಕೊಂಡು ಮಳೆಯ ಅಬ್ಬರ ಸ್ರಷ್ಟಿಸುತ್ತಾನೆ. ಹೆಂಗಾತ್ ಹೆಂಗಾತು ಎಂದು ಕೇಳುವ ಹಾಗೆ. ಈಗ ಓಡಿಸಿ ಜುಯ್ಯೆಂದು ನೋಡೋಣ. ಬೆಳೆಗ್ಗೆದ್ದು ಸ್ನಾನ ಮಾಡಿ ಪೌಡರ್ ಲಿಪಸ್ತಿಕ್ಕ್ ಇನ್ನೂ ಏನೇನು ಬೇಕು ಎಲ್ಲ ಅಲಂಕಾರ ಮಾಡಿಕೊಂಡು ಹೊರಟಿರಲ್ಲ. ಹೇಗಾಯಿತು . ಇನ್ನೊಮ್ಮೆ ಸ್ನಾನವೇ ಆಯಿತಲ್ಲ. ಅದೂ ಎಂತಾ ನೀರಿನಲ್ಲಿ! ಪರಮ ಪಾವನ! ಹುಡುಗರಾದರೋ ಅಮ್ಮಾ ಬಯ್ಯುತ್ತ ಬಯ್ಯುತ್ತ ತೊಳೆದ ಕೊಕ್ಕರೆಯಂತ ಬಿಳೀ ಶರ್ಟ್ ಹಾಕಿಕೊಂಡು ಹೋಗುತ್ತಿದ್ದಿರಲ್ಲ. ಬಿಳೀ ಶರ್ಟ್ ಹೇಗಾಯಿತು ಈಗ?