ನಮ್ಮ ಹವ್ಯಕ ಸಂಪ್ರದಾಯದಲ್ಲಿ ಹಾಡು ಎಂಬ ಶಬ್ದಕ್ಕೆ ಬೇರೆಯೇ ಅರ್ಥವಿದೆ. ಯಾವುದೇ ಹಬ್ಬ ಹರಿದಿನ ಅಥವಾ ಪೂಜೆಯ ದಿನಗಳಂದು ದೇವರ ಎದುರಿಗೆ ಹೇಳುವ ಹಾಡುಗಳೇ ಹಾಡುಗಳು.
ಪ್ರತಿಯೊಂದು ಹುಡುಗಿ ಅಥವಾ ಹೆಂಗಸು ಹಾಡಿನ ಪಟ್ಟಿ (ನೋಟೆಬೂಕ್) ಇಟ್ಟುಕೊಳ್ಳಬೇಕು. ಅದರಲ್ಲಿ ಗಣೇಶ ಚವಥಿಯ ಹಾಡು, ದೀಪಾವಳಿಯ ಹಾಡು, ನವರಾತ್ರಿಯ ಹಾಡು, ಎಂದೆಲ್ಲ ಬರೆದು ಇಟ್ಟು ಕೊಳ್ಳಬೇಕು. ಹಬ್ಬಗಳ ಮುನ್ನಾದಿನ (ಹಿಂದಿನ ದಿನ) ಅವನ್ನು ರಾಗಬದ್ದವಾಗಿ ಹೇಳುವದನ್ನು ರೂಡಿ ಮಾಡಬೇಕು. ಹಬ್ಬದ ದಿನ ಪೂಜೆಯ ಹೊತ್ತಿಗೆ, ಮೊದಲು ಸ್ವಲ್ಪ ಹೊತ್ತು "ನೀ ಹೇಳೇ" "ನೀ ಹೇಳೇ" "ಎಂಗೆ ಬತ್ತಿಲ್ಯೇ" "ಎನ್ನ ಧ್ವನಿ ಬಿದ್ದೊಜು" ಎಂದೆಲ್ಲ ನಖರೆ ಮಾಡಿ ಆಮೇಲೆ ಶುರು ಮಾಡಬೇಕು. ಒಬ್ಬಳು ಹಾಡಿದರೆ ಉಳಿದವರೆಲ್ಲ ಸ ಗುಡಬೇಕು (ಪಲ್ಲವಿಯೊಂದನ್ನು ಹಾಡುವದು) ಪೂಜೆ ಮಾಡಿದ್ದು, ಅರತಿಯೆತ್ತಿದ್ದು, ನೈವೇದ್ಯ ಮಾಡಿದ್ದು, ಹೂ ಬೇಡಿದ್ದು ಹೀಗೆ ಕ್ರಮ ಬದ್ದವಾಗಿ ಒಂದಾದ ಮೇಲೊಂದು ಹೇಳಬೇಕು.( ಆ ಸಮಯಕ್ಕೆ ಸರಿಯಾಗಿ ತಮ್ಮ ಶಕ್ತಿಯೆಲ್ಲವನ್ನು ಹಾಕಿ ಮಕ್ಕಳು ಜಾಗಟೆ ಬಡಿಯುವದರಿಂದ, ಏನೂ ಸರಿಯಾಗಿ ಕೇಳುವದಿಲ್ಲ ಎನ್ನುವದು ಬೇರೆ ಮಾತು)
ಹಾಡು ಬರದಿದ್ದವರು (ನನ್ನಂತ ಪಾಪಿಗಳು) "ಹಾಡು ಬರೋದಿಲ್ಲ ಶೇಡಿ ಬರೋದಿಲ್ಲ , ನಾವೂ ದುರುದುನ್ದೇರು " ಎಂದು ಹೇಳಿಸಿ ಕೊಳ್ಳ ಬೇಕು.
ಇನ್ನು ಕೆಲ ಸ್ತ್ರೀಯರು (ಕೆಲವು ಪುರುಷರೂ ಕೂಡ) ಹಾಡು ಕಟ್ಟುತ್ತಾರೆ. (ರಚಿಸುತ್ತಾರೆ) ಹಾಡಿನ ಲಿರಿಕ್ಸ್ ಬರೆದು ಅದಕ್ಕೆ ಧಾಟಿ ಕೂಡಿಸುತ್ತಾರೆ. ಕೆಲವರು ಅವನ್ನು ಪುಸ್ತಕ ರೂಪದಲ್ಲಿ ಪ್ರಿಂಟ್ ಕೂಡ ಮಾಡಿಸುತ್ತಾರೆ.
ಕೆಲವೂ ಹಾಡುಗಳು ಹಲವರು ತಲೆಮಾರಿಂದ ಬಂದಿರುವವು. ಅವಕ್ಕೆ ಹೆಚ್ಚು ಪ್ರಾಶಸ್ತ್ಯ.
ಈಗೆಲ್ಲ ಹಬ್ಬ ಯವೆಗೆಂದು ಇಂಟರ್ನೆಟ್ ನಲ್ಲಿ ನೋಡುವ ಕಾಲದಲ್ಲಿ ಹಾಡು ಯಾರಿಗೆ ಬರುತ್ತದೆ? ಕ್ರಮೇಣ ಈ ಕಲೆಯು ನಾಶವಾಗಿ ಹೋಗುತ್ತದೆ.
ಕೆಲವೂ ಉದಾಹರಣೆ ನೋಡಿ.
ಆದಿ ಮಾಯೆಗೆ ಆರತಿ ಮುದದಿ ಬೆಳಗುವೆ. ಆರತಿ ಮುದದಿ ಬೆಳಗುವೆ.
ಮೇದಿನಿಯೋಳು ಮೆರೆಯುತಿರುವ
ಸಾಧು ರೂಪೆ ಸಚ್ಚರಿಥೆಗೆ
ಈ ಹಾಡು ದೇವಿಗೆ ಆರತಿ ಎತ್ತಿದ ಹಾಡು
ಉಪನಯನ ಅಥವಾ ಮಾಡುವೆ ಸಂದರ್ಭದಲ್ಲಿ ನಮಸ್ಕಾರ ಮಾಡಿದ ಹುಡುಗನಿಗೆ ಅಶಿರ್ವದಿಸುವ ಹಾಡು ನೋಡಿ
ಹತ್ತು ಸಾವಿರವಾಗು ಕಿತ್ತಳೆ ವನವಾಗು
ಬಪ್ಪವರಿಗೆ ತವರು ಮನೆಯಾಗು
ಮನೆಯಾಗು ಕಂದಯ್ಯ, ನೂರರು ವರುಷ ಸುಖ ಬಾಳು
ಬೆಟ್ಟದ ಗರಿಕೆಯಾ ಮೆಟ್ಟುವರೋ ತುಳಿಯುವರೋ
ಮತ್ತೊಂದು ಗರಿಕೆ ಹುಟ್ಟುವುದು
ಕಂದಯ್ಯ, ಗರಿಕೆಯೆಂದದಲಿ ಸುಖ ಬಾಳು
ಎಷ್ಟೊಂದು ಅರ್ಥಬದ್ದವಲ್ಲವೇ

Comments
Post a Comment