ನಿನ್ನೆ ಜನಶ್ರೀ ಚಾನೆಲ್ ನಲ್ಲಿ ಎಲ್ಲರು ಸೇರಿ ನಾರಾಯಣ ಮೂರ್ತಿಯವರನ್ನು ಮತ್ತು ಐ ಟಿ ಉದ್ಯಮವನ್ನು ಬಯ್ಯುತ್ತ ಇದ್ರು. ನನಗೆ ಬಹಳ ಕೆಡುಕೆನಿಸಿತು. ಸಾಫ್ಟ್ ವೇರ್ ನವರು ಕನ್ನಡಕ್ಕೆ ಏನು ಸಹಾಯ ಮಾಡಿದ್ದರೆ? ಬರಿ ಹಣದ ಹಿಂದೆ ಹೋಗುತ್ತಾರೆ ಎಂದೆಲ್ಲ ಹೇಳುತ್ತಾ ಇದ್ರು.
ಸಾಫ್ಟ್ ವೇರ್ ನಮ್ಮ ರಾಜ್ಯವನ್ನು ಬದಲಾಯಿಸುವ ಮೊದಲು ಹೇಗಿತ್ತು ನಮ್ಮಕರ್ನಾಟಕ? ಜನರ ಆರ್ಥಿಕ ಪರಿಸ್ಥಿತಿ ಹೇಗಿತ್ತು? ಇದೆಲ್ಲ ನಿಮಗೆಲ್ಲ ಗೊತ್ತು. ಈ ಉದ್ದಿಮೆಯಿಂದ ಬಹು ಪಾಲು ಕುಟುಂಬಗಳು ಸುಧಾರಿಸಿವೆ. ಎಲ್ಲ ಕನ್ನಡಿಗರು ಸಿರಿವನ್ತರಾಗದಿದ್ದರೂ ಬಹಳಷ್ಟು ಮಂದಿ ಬಡತನದಿಂದ ಹೊರಗೆ ಬಂದಿದ್ದಾರೆ.
ನಿನ್ನೆಯ ಚರ್ಚೆಯಲ್ಲಿ ರೈತಸಂಘದ ಒಬ್ಬರು ಹೇಳಿದರು. ಇವರು ನಮ್ಮಜಮೀನನ್ನು ಕೊಂಡುಕೊಂಡು ನಮಗೆ ವಾಚ್ ಮ್ಯಾನ್ ಕೆಲಸ ಕೊಡುತ್ತಾರೆ. ಸ್ವಾಮಿ, ನಿಮಗೆ ವಾಚ್ ಮ್ಯಾನ್ ಕೆಲಸಕ್ಕೂ ತಕ್ಕ ಮಟ್ಟಿಗೆ ಸಂಬಳ ಕೊಡುತ್ತಾರೆ. ನೀವು ಈಗ ನಿರುದ್ಯೋಗಿಗಳಲ್ಲ. ಅಥವಾ ಮಳೆ ಬರದಿದ್ದರೆ ಗುಳೆ ಹೋಗಬೇಕಿಲ್ಲ. ನಿಮ್ಮ ವಾಚ್ ಮ್ಯಾನ್ ಸಂಬಳದ ಆಧಾರದ ಮೇಲೆ ನಿಮ್ಮ
ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಲಿಸುತ್ತಾ ಇದ್ದೀರಾ. ನಾಳೆ ಅವರನ್ನು ಸಾಧ್ಯ ಆದರೆ ಸಾಫ್ಟ್ ವೇರ್ ಇಂಜಿನಿಯರ್ ಮಾಡುತ್ತೀರ.
ಅಲ್ಲ ಮಹಾನುಭಾವರೇ ಅವರಿವರನ್ನು ಬಯ್ಯುತ್ತೀರಲ್ಲ. ನೀವು ಕನ್ನಡಕ್ಕೆ ಏನು ಮಾಡಿದ್ದೀರ?