ಈಗ ೨೦ ವರ್ಷಗಳ ಹಿಂದೆ ಹೀಗೆ ಇರಲಿಲ್ಲ. ನಾನು ಬೆಂಗಳೂರಿಂದ ನಮ್ಮೂರಿಗೆ ಹೋದರೆ ಬೇರೆಯದೇ ವಿಶ್ವ ಕಾದಿರಿತ್ತಿತ್ತು.
ಗಂಡಸರು ಜಗುಲಿಯಲ್ಲಿ ಲೋಡಿಗೆ ಸಾದಿ ಕೂತು ಬಾಯಿ ತುಂಬಾ ಕವಳ ತುಂಬಿಕೊಂಡು ಮಾತಾಡುತ್ತ ಅಥವಾ ಇಸ್ಪೀಟ್ ಆಡುತ್ತ ಆಗಾಗ ಹೆಂಡತಿ / ತಾಯಿ/ತಂಗಿ ಬೆಳಿಗ್ಗೆ ತಾನೇ ಚೊಕ್ಕ ಮಾಡಿದ ಕಡಬಾರಕ್ಕೆ ಪಿಚಕ್ಕೆಂದು ಕವಳ ತುಪ್ಪಿ ಬರುತ್ತಾ ಇದ್ದರು. ಹೆಂಗಸರು ಅರೆ ಕತ್ತಲೆ ಅಡಿಗೆ ಮನೆಯಲ್ಲಿ ಸೌದೆ ಒಲೆಯನ್ನು ಊದಿ ಊದಿ ಸೋತು ೨ ಫೂಟು ಅಗಲದ ಒರಳಿನಲ್ಲಿ ಕಾಯಿ ರುಬ್ಬುತ್ತ , ಹಾಳಾಗಿರುವ ಮಿಕ್ಸರನ್ನು ಬಯ್ಯುತ್ತ, ೮ ಗಂಟೆ ಮಾಯವಾಗುವ ಕರೆಂಟನ್ನು ಬಯ್ಯುತ್ತ ಒಲೆಯ ಮೇಲಿನ ಅನ್ನದ ಚರಿಗೆಯನ್ನು ನೋಡುತ್ತಾ ಇರುತ್ತಿದ್ದರು. ಮಕ್ಕಳು ಜಗುಲಿಗೆ ಹೋಗಿ ಏನೋ ಹೋಳಿ ಮಾಡಿ ಅಪ್ಪನ ಹತ್ರ ಬೈಸಿಕೊಂಡು ಒಳಗೆ ಬಂದು ಹಶವು ಎಂದು ಅಮ್ಮನ ಹತ್ರ ಹೊಡೆಸಿಕೊಂಡು ಅಂಗಳಕ್ಕೆ ಹೋಗಿ ಅದಕ್ಕೂ ಬೈಸಿಕೊಂಡು ಅಳುತ್ತ ಪುಸ್ತಕ ಹಿಡಿದು ಕೂರುತ್ತಿದ್ದರು.
ಕಾರ್ಯ (ಮದುವೆ , ಉಪನಯನ ಇತ್ಯಾದಿ ) ಮನೆಗಳಲ್ಲಿ ಕಾಣುವ ದ್ರಶ್ಯವೂ ಚೆನ್ನಾಗಿತ್ತು. ಹೆಂಗಸರು ತುಂಬಾ ಹತ್ತಿರದ ಮದುವೆಯಾದರೆ ತಮ್ಮ ಮದುವೆಯಲ್ಲಿ ಗಂಡನ ಮನೆಯಲ್ಲಿ ಕೊಟ್ಟ ರೇಷ್ಮೆ ಸೀರೆ ಉಟ್ಟು, ಇಲ್ಲವಾದರೆ ಇದ್ದದ್ದರಲ್ಲೇ ಹೊಸದಾದ ಸೀರೆ ಉಟ್ಟು, ಅದಕ್ಕೆ ಬಿಳಿಯದೋ, ಕರಿಯದ್ದೋ ಬ್ಲೌಸ್ ತೊಟ್ಟು, ಅತ್ತೆ ಕೊಟ್ಟರೆ ವಟಾಣಿ ಸರ ಹಾಕಿಕೊಂಡು , ಸ್ವಲ್ಪ ಪೌಡರ್ ಹಚ್ಚಿಕೊಂಡು ಬರುತ್ತಿದ್ದ ಹೆಂಗಸರು ಒಳಗೆ ತರಕಾರಿ ಕೊರೆಯುತ್ತ, ಲಾಡು ಕಟ್ಟುತ್ತ, ಹೋಳಿಗೆ ಬೇಯಿಸುತ್ತ ಅವರ್ಮನೆ ಕೂಸಿಗೆ ಮದುವೆ ಆಜಿಲ್ಲೆ. ಆ ಕಜ್ಜಾಯ ಮಾಡಿದ್ದು ಸರಿ ಆಗಿತ್ತಿಲ್ಲೆ ಎಂದೆಲ್ಲ ಕತೆ ಹೇಳುತ್ತಿದ್ದರು.
ಈಗ ೨೦ ವರ್ಷದ ನಂತರ ಬೆಂಗಳೂರಿನ ಶ್ರೀಮಂತಿಕೆ, ನಮ್ಮಲ್ಲಿಗೂ ಹರಿದು ಬನ್ದಿದೆ. ಮನೆ ಮನೆಗೆ ಕಾರು, ಬೈಕು, ಟಿ ವಿ, ಫ್ರಿಜ್ ಎಲ್ಲ ಸಲಕರಣಗಳೂ ಬನ್ದಿವೆ.
ಮದುವೆ ಮನೆಗೆ ಹೋದರೆ ಹೆಂಗಳೆಯರು ಧಾರೆಗೆ ಒಂದು, ಎದುರುಗೊಂಡಿದ್ದಕ್ಕೆ ಒಂದು, ಎಂದೆಲ್ಲ ೩/೪ ರೇಷ್ಮೆ ಸೀರೆ ಉಟ್ಟು, ಮಧ್ಯ ಮಧ್ಯ ಕಾಂತ ವರ್ಕ್ ಸೀರೆ, ಎಂಬ್ರಯ್ದರಿ ಸೀರೆ ಎಂದೆಲ್ಲ ಉಡುತ್ತ, ಕತ್ತಿಗೆ ೨-೩ ನೆಕಲೆಸ್, ಕೈಗೆ ಬಳೆ , ಪಾಟಲಿ , ಜೊತೆಗೆ ಒಂದೆರಡು ಕಾಜಿನ ಬಳೆ, ಮುಖಕ್ಕೆ ಎಲ್ಲ ತರಹದ ಕ್ರೀಮ್, ಲಿಪ್ ಸ್ಟಿಕ್ ಎಲ್ಲ ಬಳಿದು ಎಮ್ಮನೆ ತಮ್ಮ(ಮಗ ) ಬೆಂಗಳೂರಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಅಲ್ಲಿ ಮನೆ ಮಾಡಿದ್ದ. ಎಮ್ಮನೆ ತಂಗಿ (ಮಗಳು) ಕೆಮಿಕಲ್ ಇಂಜಿನಿಯರಿಂಗ್ ೩ನೆ ಸೆಮಿಸ್ಟರ್ ಎಂದೆಲ್ಲ ಮಾತಾಡುತ್ತ ಕುಳಿತಿರುತ್ತಾರೆ,

Comments
Post a Comment