ಗಣೇಶನ ಹಬ್ಬ ಮುಗಿಯಿತು. flash-back ನಲವತ್ತು ವರ್ಷಗಳ ಹಿಂದಿನ ಹಬ್ಬ. ದೊಡ್ಡ ದೇವರ ಕೋಣೆ. ಆಲ್ಮೋಸ್ಟ್ ಬೆಂಗಳೂರಿನ ಮನೆಯಷ್ಟು. ಅದರ ತುಂಬಾ ಹಾಡು ಹೇಳುತ್ತಿರುವ ಹೆಂಗಸರು (ಹಾಡೆಂದರೆ ದೇವರ ಹಾಡು. ಹಬ್ಬಕ್ಕೆಂದು ಸ್ಪೆಷಲ್ ಆಗಿ ಬರೆದ, ಬೇರೆ ಬೇರೆ ಸಂದರ್ಭಕ್ಕೆ ಬೇರೆ ಬೇರೆ ಹಾಡುಗಳು. ಪೂಜೆ ಮಾಡಿದ್ದಕ್ಕೊಂದು, ಹೂ ಏರಿಸಿದ್ದಕ್ಕೊಂದು, ಆರತಿ ಎತ್ತಿದ್ದಕ್ಕೊಂದು, etc etc. ) , ಜಾಗಟೆ ಬಾರಿಸುತ್ತಿರುವ ರಾಗ ಹಾಡುತ್ತಿರುವ (ಅಮ್ಮಾ ಎತ್ತಿಕೋ ), ಸುರ್ ಸುರ್ ಬತ್ತಿ ಹಚ್ಚುತ್ತಿರುವ ಮಕ್ಕಳು, ಯಾವಾಗ ಈ ರಗಳೆ ಮುಗಿದು ಒಂದು ಕವಳ ಹಾಕುತ್ತೇನೋ ಎಂದುಕೊಳ್ಳುತ್ತಿರುವ ಗಂಡಸರು. ಆರತಿ ಶುರು ಆಯಿತು. ಡನ್ ಡನ್ ಡನ್ ಜೋರಾಗಿ ಜಾಗಟೆ. ಇವರ ಗಣೇಶನನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೋ ಏನು.
ಜಗುಲಿಯಲ್ಲಿ ಇನ್ನೊಂದು ಗಲಾಟೆ. ಪಟಾಕಿಗಳು ಪಟಾಕಿಗಳ ಸರಗಳು. ಅಬ್ಬರವೋ ಅಬ್ಬರ. ಅದನ್ನು ಕೇಳಿ ಹೆದರಿ ಅಮ್ಮಂದಿರ ಸೆರಗಲ್ಲಿ ಅಡಗಿಕೊಳ್ಳುವ ಪುಟ್ಟ ಮಕ್ಕಳು.
ಇದೆಲ್ಲ ಮುಗಿದ ಮೇಲೆ ಊರ ಎಲ್ಲ ಮನೆಯವರು ಸೇರಿ ಗಣೇಶನನ್ನು (ಗಣೇಶನ್ದಿರನ್ನು??) ಮುಳುಗಿಸಲು ಕರೆದೊಯ್ಯುವ ಸಂಭ್ರಮ. ಮೆರವಣಿಗೆ ಅದರ ಜೊತೆಗೆ ಮಳೆ ದೊಡ್ಡವರಿಗೆ ಮಳೆಯಲ್ಲಿ ನೆನೆಯಲು ಬೇಸರವಾದರೆ, ಮಕ್ಕಳಿಗೆ ಹಾಗೇನಿಲ್ಲ. ಅವರ ಚಿಂತೆಯೇ ಬೇರೆ. ಕತ್ತಲೆಯಲ್ಲಿ ಇಂಬಳ ಕಾಲಿಗೆ ಹತ್ತಿಕೊಂಡರೆ ಏನು ಮಾಡುವದು? ಆದರೂ ಇಲಿ ಮರಿ ಅಥವಾ ಹಾವೂ ಸಿಗಬಹುದೆಂಬ ಆಸೆಯಲ್ಲಿ ಅವರೂ ಬರುತ್ತಾರೆ.
How I miss those days!!!!

Comments
Post a Comment