ಈ ಶಬ್ದಕ್ಕೆ ವೇದಾಂತವನ್ನು ನಮ್ಮ ಅನುಕೂಲಕ್ಕೆ ತಕ್ಕ ಹಾಗೆ ತಿರುಚಿಕೊಳ್ಳುವುದು ಎಂಬ ಅರ್ಥ. ಆದರೆ ಇನ್ನೂ ಒಂದು ಅರ್ಥ ಆಗಬಹುದಲ್ಲ. ಅನುಕೂಲ ಪರಿಸ್ತಿತಿಯಲ್ಲಿ ವೇದಾಂತ ಹೇಳುವುದು. ಮಿಕ್ಕಿದ್ದಂತೆ ನಮ್ಮ usual self(ish) ಆಗಿ ಇರುವದು. ಈಗ ನೋಡಿ charity ಎಂದೋ, ವರ್ಲ್ಡ್ ಫುಡ್ ಪ್ರೋಗ್ರಾಮ್ ಎಂದೋ ಓದಿದ್ದೆ ಓದಿದ್ದು ಕೊರೆದಿದ್ದೆ ಕೊರೆದಿದ್ದು. ಆಮೇಲೆ ಕೆಲಸದ ಮುದಿ ಯಮ್ಮ ಹುಷಾರಿಲ್ಲ ಎಂದು ಎರಡು ದಿನ ಬರದಿದ್ದರೆ ಅವಳ ಸಂಬಳದಲ್ಲಿ ದುಡ್ಡು ಹಿಡಿದುಕೊಂಡು ಕೊಡುವದು. ಗಂಡ ಅವನ ತಂಗಿಯ ಮಗನಿಗೆ ಒಂದು ಸಾವಿರಾರು ರೂಪಾಯಿಯ ಉಡುಗೊರೆ ಕೊಡುತ್ತಾನೆ ಎಂದರೆ ಅದಕ್ಕೆ ರಂಪ ಮಾಡುವದು.
ಅಷ್ಟಲ್ಲದೇ ನಮ್ಮ ಹಿರಿಯರು ಹೇಳುತ್ತಿದ್ದರೆ - ಸಾಸ್ತ್ರ ಹೇಳಾಕೆ ಇರ್ತೈತೆ ಬಾನ ಉಂಬಾಕೆ ಇರ್ತೈತೆ ಎಂದು.
ಆದರೆ ನಿಜವಾಗಿಯೂ ಈ ವೇದ, ವೇದಾಂತ ಪುರಾಣದಲ್ಲಿ ಇರುವದಾದರು ಏನು. ಬರಿ ದೇವರೇ ನನಗೆ ಇದನ್ನು ಕೊಡು, ಅದನ್ನು ಕೊಡು, ನಿನಗೆ ನಾನು ಎರಡು ತೆಂಗಿನಕಾಯಿ ಒಡೆಯುತ್ತೇನೆ, ಮೂರು ಪ್ರದಕ್ಷಿಣೆ ಹಾಕುತ್ತೇನೆ ಎನ್ನುವ ಲೇವಾ - ಲೇವಿಯೇ ? (ಅಲ್ಲ, ಅದರಲ್ಲೂ ಮೋಸ, ದೇವರು ನಮ್ಮ ಪ್ರದಿಕ್ಷಿಣೆ ತೆಗೆದು ಕೊಂಡು ಮಾಡುವದಾದರೂ ಏನು. ಆ ಒಡೆದ ತೆಂಗಿನ ಕಾಯಲ್ಲಿ ಒಂದು ಹೋಳಾದರು ಅವನಿಗೆ ಸಿಗುವುದೇ) ಅಥವಾ ನೀನೆ ಇಂದ್ರ, ನೀನೆ ಚಂದ್ರ, ನಿನ್ನ ಬಿಟ್ಟು ಇನ್ಯಾರು ಇಲ್ಲ ಎಂಬ ಮುಖ ಸ್ತುತಿಯೇ? ಹೀಗೆಲ್ಲ ವಿಶ್ಲೇಷಣೆ ಮಾಡಿ ಪೂಜೆ ಪುನಸ್ಕಾರಗಳ ಅರ್ಥವನ್ನೇ ಕನ್ಫ್ಯೂಸ್ ಮಾಡಿಸುತ್ತೇನೆ ಎಂದು ಬೈಬೇಡಿ. ನನಗಿಲ್ಲದ ದೇವರು ನಿಮಗೆ ಯಾಕೆ ಎಂಬ ಅಸೂಯೆ ಎಂದುಕೊಳ್ಳಬೇಡಿ.
ಇನ್ನು ಮೇಲೆ ವೇದಾಂತ ಹೇಳಬೇಕೆಂದು ಬಾಯಿ ತೆಗದಗೆಲ್ಲ ಇದೆಲ್ಲ ನೆನಪಿಗೆ ಬಂದು ನಿಮ್ಮ ಬಾಯಿ ಬಂದಾಗಿ ಬಿಟ್ಟರೆ - ನಾನು ಬರೆದಿದ್ದು ಸಾರ್ಥಕ
Comments
Post a Comment