ಮತಿ ನಯನದಂತೆ ಮುಂದಿರ್ಪುದನು ನೋಡುವದು
ಮಿತವದರ ಕೆಲಸ ಹೆಳವನ ಚಲನೆಯಂತೆ
ಗತಿಶಕ್ತಿಯದಕೆ ಮನವೆಂಬ ಚರಣದ ಬಲದೆ
ಮತಿಬಿಟ್ಟ ಮನ ಕುರುಡು ಮಂಕುತಿಮ್ಮ
ನಿನ್ನ ಹೆಗಲಿನ ಹೊರೆಯ ದೈವ ಭುಜಕೇರಿಸುವ
ಸನ್ನಾಹ ಸಾಗೀತೆ? ದೈವವೊಪ್ಪೀತೆ ?
ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ, ಭಿನ್ನಿಸಲಿ
ನಿನ್ನ ಬಲವನ್ನು ಮೆರೆಸೋ ಮಂಕುತಿಮ್ಮ
Comments
Post a Comment