ಇವತ್ತು ಸ್ವಲ್ಪ ಬಿಸಿ ದಿನ. ಅದರಲ್ಲಿ ಹೊಸತೇನು . ಈ ವರ್ಷದ ಬೇಸಗೆ ಸಿಕ್ಕಾಪಟ್ಟೆ ಬಿಸಿಲು , ತಡೆಯಲಾರದ ಸೆಕೆ ಅಂದಿರಾ . ನಾನು ಹೇಳಿದ್ದು ಆ ಬಿಸಿಯಲ್ಲ. ಇಂಗ್ಲಿಷ್ ಬಿಸಿ.
ವರುಷ ಆರಂಭವಾಗುವ ಯುಗಾದಿ ಹಬ್ಬವಲ್ಲ. ಪೂಜೆ, ವಿಶೇಶ ಅಡಿಗೆ ಎಲ್ಲ ಕೆಲಸವಿರುತ್ತದೆ. ಪ್ರತಿ ದಿನದಂತೆ ಅರ್ಧ ಗಂಟೆಯ ಅಡಿಗೆ ಅಲ್ಲವಲ್ಲ. ಹೋಳಿಗೆಯಿಂದ ಶುರು ಮಾಡಿ ಉಂಡೆಯವರೆಗೆ ತಯಾರಿಸಿ ಜೊತೆಗೆ ಮಾಮೂಲಿ ಅನ್ಬೊಡೆ, ಕೋಸುಂಬರಿ, ಪಲ್ಯ ಎಲ್ಲ ತಯಾರಿಸಿ ದೇವರಿಗೆ ತೋರಿಸಿ ನಾವು ತಿನ್ನುವ ಸಂಭ್ರಮ .
ಎರೆಡೆರಡು ಸಿಹಿ ತಿಂಡಿಯ ಯುಗಾದಿಗೆ ಎಂದು ಆಶ್ಚರ್ಯವೇ? ಒಂದಕ್ಕಿಂತ ಹೆಚ್ಚು ಸಿಹಿ ಮಾಡಲು ಇದೇನು ಚೌತಿ ಹಬ್ಬವೇ? ತಿಂಡಿ ಪೋತ ಗಣೇಶನ ಹಬ್ಬಕ್ಕೆ ನಾನೂ ಸಹ (ಜಗತ್ತಿನಲ್ಲೆಲ್ಲ ಅಗ್ರಗಣ್ಯ ಆಲಸಿಯಾದ ನಾನೂ ಸಹ) , ಕನಿಷ್ಟ ಐದು ಸಿಹಿ ತಿಂಡಿ ಮಾಡುತ್ತೀನೆ. ಹದಿನಾರು ಪ್ರಕಾರದ ತಿಂಡಿ ಮಾಡುವರೂ ಇರುತ್ತಾರೆ. ಪಾಪದ ಗಣೇಶ!
ಎರೆಡೆರಡು ಸಿಹಿ ಮಾಡಲಿಲ್ಲ. ಹೋಳಿಗೆ ಆರಂಭ ಮಾಡಿ ಅದು ಕ್ರಾಶ್ ಆಗಿ, ಡಿಬಗ್ ಮಾಡಲು ಹೋಗಿ, ಸಾಧ್ಯವಾಗದೆ ಮಾಡ್ಯುಲನ್ನೇ ಬದಲಾಯಿಸಿದೆ. ದುರದ್ರಷ್ಟವಾಷತ್ ಅಡಿಗೆ ಮನೆಯಲ್ಲಿ ಬ್ರೇಕ್ ಪಾಯಿಂಟ್ ಹಾಕಿ ಸ್ಟೆಪ್ ಬಾಯ್ ಸ್ಟೆಪ್ ಎಕ್ಷಿಕ್ಯುಶನ್ ಸಾಧ್ಯವಿಲ್ಲವಲ್ಲ .
ಅಲ್ಲ, ನನ್ನ ಮತ್ತು ಅಡಿಗೆ ಮನೆಯ ರಿಲೇಶನ್ ಅಷ್ಟಕ್ಕಷ್ಟೇ ಎಂದು ಗೊತ್ತಿದ್ದೂ ಪ್ರೊ ಗಳು ಮಾಡುವ ಹೋಳಿಗೆ ಯಾಕೆ? ಸುಲಭವಾಗಿ ಜಾಮೂನೋ, ಕೆಸರಿಬಾತೋ ಮಾದಬಾರದಿತ್ತಾ ಎಂದು ಕಮ್ಮಿಸರೆಟ್ ಮಾಡ್ತಾ ಇದ್ದೀರಾ ? ಬಹಳ ವರ್ಷದಿಂದ ಯುಗಾದಿಗೆ ಹೋಳಿಗೆ ಮಾಡುವ ಸಂಪ್ರದಾಯ. ಕಷ್ಟದ ಹೋಳಿಗೆ ಮಾಡಿದರಾದರೂ ಉಷಂಗೆ ಅಡಿಗೆ ಬರುವದಿಲ್ಲ ಎಂಬ ಅಪವಾದದಿಂದ ಮುಕ್ತಿಯೇನೋಎಂಬ ಪ್ಲಾನು. ಆದರೆ ಪ್ರತಿ ವರ್ಷ ಬೇಳೆ ಹೋಳಿಗೆ ಮಾದುತ್ತಿದ್ದೆ.
ಮಾಡುವ ಮೊದಲ ಅಮ್ಮನಿಂದ ಸ್ಟೆಪ್ ಬಾಯ್ ಸ್ಟೆಪ್ ಮಾಹಿತಿ ಕೇಳಿಕೊಳ್ಳುತ್ತಿದ್ದೆ ಪ್ರತಿ ವರ್ಶ. . ಈ ವರ್ಷ ಒಳ್ಳೆಯ ಉಪ್ಪಿನಕಾಯಿ ಮಾಡಿದ ಗರ್ವದಿಂದ ಬೀಗುತ್ತ ಕೇಳಲು ಹೋಗಲಿಲ್ಲ. Pride is followed by fall ತಾನೇ
ಅದಕ್ಕಾಗಿ, ಹೋಳಿಗೆಯಿಂದ ಶುರು ಮಾಡಿ ಉಂಡೆಯ ತನಕ ತಯಾರಿಸಿ ನಂತರ (ತಲೆ) ಹರಟೆ ತಯಾರಿಸಿ ನಿಮ್ಮ ಮುಂದೆಅಡಬರಿಯುತ್ತಿದ್ದೇನೆ ಸಮರ್ಪಿಸುತ್ತಿದ್ದೇನೆ

ಅದಕ್ಕಾಗಿ, ಹೋಳಿಗೆಯಿಂದ ಶುರು ಮಾಡಿ ಉಂಡೆಯ ತನಕ ತಯಾರಿಸಿ ನಂತರ (ತಲೆ) ಹರಟೆ ತಯಾರಿಸಿ ನಿಮ್ಮ ಮುಂದೆ
Comments
Post a Comment