I tried searching for inspiration using stumbleupon , but not closing blogger window. That is real optimism. But inspiration does not work that way. OK. Let me post some thing from my old note book.
ನವಜಾತ ಶಿಶುವ ಹೊಳೆಗೆಸೆದ ಅಮ್ಮ
ನೂ ಅಪ್ಪನೂ ಆಗಿ ಸಾಕಿದ ತಂದೆಯೂ
ತನ್ನಷ್ಟೇ ಎತ್ತರದ ಮಗನೆದುರು
ಪ್ರೇಮ ರೋಗವೆಂದು ಅಳಲಿದಾಗ
ಏನು ಮಾಡಬೇಕಿತ್ತು ಈ ದೇವವ್ರತ
ಭೀಷ್ಮನಾಗದೇ ?
ತೊಟ್ಟ ಭೀಷ್ಮ ಶಪಥವ
ಹೊಗಳಿದಾಗ ಎದೆಯುಬ್ಬಿತ್ತು
ಇಂತಹ ತ್ಯಾಗಿ ಮನೋ ನಿಗ್ರಹಿ
ಇರಬಲ್ಲರೆ ?
ಅರಿಯದ ಮುಗುದ
ಮಕ್ಕಳ - ಅಪ್ಪನ ಮಕ್ಕಳ ಸಾಕಿ
ಸಲಹಿದೆ
ರಾಜ ಕುವರಿಯರ ಗೆದ್ದು ತಂದು
ಅವರ ಮದುವೆಯ ಮಾಡಿದೇ
ಫಲ
ಅಂಬೆಯ ಶಾಪ
ಇಂದು ಅವರ ಮೊಮ್ಮಕ್ಕಳು
ಒಬ್ಬರನ್ನೊಬ್ಬರು ಕೊಲ್ಲಲು ಹೊರಟಾಗ
ಕಣ್ಣೀರು ಹೊರಬಾರದು ಬಾರದಿರದು
ಇವರ ಪ್ರಶ್ನಿಸಲು ನಾನಿವರ
ಅಜ್ಜನೆ?
ಅಲ್ಲ, ಇವರು ನನ್ನ ಸಂತಾನವಲ್ಲ.
ಅಖಿಲ ಜೀವ ಜನ್ತುಗಳೆಲ್ಲ
ಸಂತಾನಕ್ಕಾಗಿಯೇ
ಬದುಕಿ ಸಾಯುವಾಗ
ಯಾವ ಸಾರ್ಥಕತೆಗೆ
ಈ ಪ್ರತಿಜ್ಞೆ?
ಈ ಬಾಳು ?
ನವಜಾತ ಶಿಶುವ ಹೊಳೆಗೆಸೆದ ಅಮ್ಮ
ನೂ ಅಪ್ಪನೂ ಆಗಿ ಸಾಕಿದ ತಂದೆಯೂ
ತನ್ನಷ್ಟೇ ಎತ್ತರದ ಮಗನೆದುರು
ಪ್ರೇಮ ರೋಗವೆಂದು ಅಳಲಿದಾಗ
ಏನು ಮಾಡಬೇಕಿತ್ತು ಈ ದೇವವ್ರತ
ಭೀಷ್ಮನಾಗದೇ ?
ತೊಟ್ಟ ಭೀಷ್ಮ ಶಪಥವ
ಹೊಗಳಿದಾಗ ಎದೆಯುಬ್ಬಿತ್ತು
ಇಂತಹ ತ್ಯಾಗಿ ಮನೋ ನಿಗ್ರಹಿ
ಇರಬಲ್ಲರೆ ?
ಅರಿಯದ ಮುಗುದ
ಮಕ್ಕಳ - ಅಪ್ಪನ ಮಕ್ಕಳ ಸಾಕಿ
ಸಲಹಿದೆ
ರಾಜ ಕುವರಿಯರ ಗೆದ್ದು ತಂದು
ಅವರ ಮದುವೆಯ ಮಾಡಿದೇ
ಫಲ
ಅಂಬೆಯ ಶಾಪ
ಇಂದು ಅವರ ಮೊಮ್ಮಕ್ಕಳು
ಒಬ್ಬರನ್ನೊಬ್ಬರು ಕೊಲ್ಲಲು ಹೊರಟಾಗ
ಕಣ್ಣೀರು ಹೊರಬಾರದು ಬಾರದಿರದು
ಇವರ ಪ್ರಶ್ನಿಸಲು ನಾನಿವರ
ಅಜ್ಜನೆ?
ಅಲ್ಲ, ಇವರು ನನ್ನ ಸಂತಾನವಲ್ಲ.
ಅಖಿಲ ಜೀವ ಜನ್ತುಗಳೆಲ್ಲ
ಸಂತಾನಕ್ಕಾಗಿಯೇ
ಬದುಕಿ ಸಾಯುವಾಗ
ಯಾವ ಸಾರ್ಥಕತೆಗೆ
ಈ ಪ್ರತಿಜ್ಞೆ?
ಈ ಬಾಳು ?
Comments
Post a Comment