ಆಗ - ನಡೆಯುವ ದಾರಿಯಲ್ಲಿ ಕಲ್ಲು ಮುಳ್ಳುಗಳು ತುಂಬಿರುತ್ತಿದ್ದವು. ರಸ್ತೆಯಲ್ಲಿ ನಡೆಯುವರರ ಪಾದ ಗಾಯಗಳಿಂದ ಆವ್ರತವಾಗಿರರುತ್ತಿತ್ತು
ಈಗ - ಗಾಡಿ ಓಡಿಸೋ ರಸ್ತೆಯಲ್ಲಿ ಹೊಂಡಗಳು, ಮ್ಯಾನ್ ಹೋಲ್ ಕವರ್ಗಳೆಂಬ ಪರ್ವತಗಳು ತುಂಬಿರುತ್ತವೆ. ಗಾಡಿಯಲ್ಲಿ ಹೋಗುವವರ ತಲೆ ನೂರು ಹೋಳಾಗದಿದ್ದರೆ ಅವರ ಪುಣ್ಯ.
ಆಗ - ದಾರಿಯ ಮಧ್ಯದಲ್ಲಿ ನದಿಯೋ ಹೊಳೆಯೋ ಅಡ್ಡ ಬಂದು ಮುಂದೆ ಹೋಗುವದು ಹೇಗೆಂಬ ಸಮಸ್ಯೆ ಎದುರಾಗುತ್ತಿತ್ತು.
ಈಗ - ರಸ್ತೆಯ ಮಧ್ಯದಲ್ಲಿ ಪ್ರಪಾತ ಅಡ್ಡ ಬಂದು ಗಾಡಿ ಓಡಿಸುವವನು(ಳು) ತಬ್ಬಿಬ್ಬಾಗುವ ಪರಿಸ್ಥಿತಿ. (ಉದಾ .ಬಸವನಗುಡಿ ಪೋಸ್ಟ್ ಆಫೀಸ್ ಎದುರು ನೋಡಿದ್ದೀರಲ್ಲ )
ಆಗ - ಕಾಡು ಪ್ರಾಣಿಗಳೋ, ಹಾವೋ ಬರ ಬಹುದೆಂಬ ಭಯವಿರುತ್ತಿತ್ತು.
ಈಗ - ಟ್ರಾಫಿಕ್ ಪೋಲಿಸ್ ಎಂಬ ಗುಮ್ಮ ಬಂದು ರೊಂಗ್ ವೇ ಎಂದೋ, ಕೆಂಪು ಸಿಗ್ನಲ್ ಕ್ರಾಸ್ ಮಾಡಿದ್ದೀಯೆಂದೋ ದಂಡ ಹಾಕಿ ಬಿಡಬಹುದೆಂಬ ಭಯ
ಈಗ ಹೇಳಿ. ನಮ್ಮ ಕಾಲ ಸುಧರಿಸಿದೆಯಾ ?

Comments
Post a Comment