ನಮ್ಮ ನಡುವಳಿಕೆ ಬಹಳ ಸಿಂಪಲ್. ಅಗಸ್ಟ್ 15ಕ್ಕೆ ನಾವು ದೇಶ ಭಕ್ತರು. ನವೆಂಬರ್ 1ಕ್ಕೆ ಕನ್ನಡ ಅಭಿಮಾನಿಗಳು. ಉಳಿದೆಲ್ಲ ದಿನ ನಾವು wannabe ಅಮೆರಿಕನ್ನರು.
ನಿನ್ನೆ ಅಮ್ಮನ ಜೊತೆ ವಾದ ಮಾಡುವಾಗ ಹೇಳಿದೆ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯ ಶ್ರೀಮಂತವಾಗಿದೆ. ಅಮ್ಮನದು ಯಾವಾಗಲು ಕಂಪ್ಲೇಂಟ್ ನಾನು ಕನ್ನಡ ಓದುವದಿಲ್ಲ. ಬರೆಯುವದಿಲ್ಲ.
ಹೌದು. ಇಂಗ್ಲಿಷ್ ಭಾಷೆ ಶ್ರೀಮಂತ ಭಾಷೆ. ನಮ್ಮದು ಅಷ್ಟೊಂದು ಶ್ರೀಮಂತವಲ್ಲ. ಹೇಗಾದೀತು. ನಾವು ನೀವು ಎಲ್ಲ ವರ್ಷಕ್ಕೆ ಒಂದು ದಿನ ಮಾತ್ರ ಕನ್ನಡವನ್ನು ನೆನಪಿಸಿಕೊಳ್ಳುವವರು. ನಮಗೆ ಕನ್ನಡದ ಪುರಾತನ ಸಾಹಿತ್ಯದ ಬಗ್ಗೆಯಾಗಲೀ, ಸಮಕಾಲೀನ ಸಾಹಿತ್ಯವಾಗಲೀ ಎಷ್ಟು ಗೊತ್ತು? ಒಂದು ಕಾರಂತರು, ಒಂದು ಬೇಂದ್ರೆ ಬಿಟ್ಟರೆ ಬೇರೆ ಯಾರೂ ಗೊತ್ತಿಲ್ಲ. ಇನ್ನು ರನ್ನ, ಪಂಪ, ಕುಮರವ್ಯಾಸರೋ, ಕನ್ನಡ ಶಾಲೆಯಲ್ಲೇ ವಿದಾಯ ಹೇಳಿಸಿಕೊಂಡರು. ಓದುವವರು, ಬರೆಯುವವರು ಇದ್ದರೆ ತಾನೇ ಸಾಹಿತ್ಯ ಬೆಳೆಯುವದು, ಬದುಕುವದು?
ನಮ್ಮ ತಲೆಮಾರೇ ಹೀಗೆ ಹೇಳಿದರೆ ನಮ್ಮ ಮಕ್ಕಳೋ ಕನ್ನಡವನ್ನು ಹೆಕ್ಕಿ ಹೆಕ್ಕಿ ಕಷ್ಟ ಪಟ್ಟು ಓದುತ್ತಾರೆ. BMTC ಬೋರ್ಡ್ ಗಳನ್ನು ಓದಲೂ ಕಷ್ಟ. ಕನ್ನಡ ಒಂದು ವಿಷಯವಾಗಿ ಕಲಿತದ್ದಕ್ಕೆ ಇಷ್ಟಾದರೂ ಬರುತ್ತದೆ.
ಹಾಗಾದರೆ ಇದಕ್ಕೆ ಪರಿಹಾರವೇನು. ಮತ್ತೇನೂ ಇಲ್ಲ. ಮುಂದಿನ ವರ್ಷ ನವೆಂಬರ್ 1ಕ್ಕೆ ಮತ್ತೆ ಕನ್ನಡ ನಮ್ಮ ಮಾತೃ ಭಾಷೆಯೆಂದು ನೆನೆಸಿಕೊಂಡು ಸ್ವಲ್ಪ ಮೊಸಳೆ ಕಣ್ಣೀರು ಸುರಿಸೋಣ. ಅಲ್ಲಿಯ ತನಕ ವಿದಾಯ....

Comments
Post a Comment