Every trivial work has some fruits hidden. Was cleaning the lofts and find an old note book with some translated poems. One blog post gained. !!!
ಸ್ವರ್ಗದಿಂದಿಳಿಯುವ ಬೆಳ್ಳಿ ಎಳೆ ನಾನು
ಉದ್ಯಾನಗಳ ಬೆಳೆಗಿಸಲು ಹೂದೋಟ ಸಜ್ಜಿಸಲು
ಇಂದ್ರನ ಕಿರೀಟದಿಂದ ಬಿಡಿಸಿದ
ಮುತ್ತು ನಾನು
ನಾನತ್ತರೆ ಬೆಟ್ಟಗಳ ಅಟ್ಟಹಾಸ
ಬಾಗಿದರೆ ಹೂಗಳ ಹರುಷ
ದೂತ ನಾ ಭುವಿ ಗಗನಗಳ ಪ್ರೇಮಕ್ಕೆ
ಇಂಗಿಸುವೆ ನೆಲದ ತ್ರಷೆಯ
ಬರುವೆ ಆರ್ಭಟದಿಂದ ಹೋಗುವೆ ಚಿತ್ತಾರದೊಡನೆ
ಕಡಲಾಳದಿಂದ ಸಾಗಿ
ಗುಡ್ಡ ಬೆಟ್ಟಗಳ ಹಾದು
ಕಣಿವೆಗಳನಿಳಿದು
ಮರಗಳ ತಬ್ಬುವೆ ಹೂಗಳ ಚುಂಬಿಸುವೆ
ಆದರೂ ನಾನು ಏಕಾಂಗಿ ಸಂಚಾರಿ
ಸ್ವರ್ಗದಿಂದಿಳಿಯುವ ಬೆಳ್ಳಿ ಎಳೆ ನಾನು
ಉದ್ಯಾನಗಳ ಬೆಳೆಗಿಸಲು ಹೂದೋಟ ಸಜ್ಜಿಸಲು
ಇಂದ್ರನ ಕಿರೀಟದಿಂದ ಬಿಡಿಸಿದ
ಮುತ್ತು ನಾನು
ನಾನತ್ತರೆ ಬೆಟ್ಟಗಳ ಅಟ್ಟಹಾಸ
ಬಾಗಿದರೆ ಹೂಗಳ ಹರುಷ
ದೂತ ನಾ ಭುವಿ ಗಗನಗಳ ಪ್ರೇಮಕ್ಕೆ
ಇಂಗಿಸುವೆ ನೆಲದ ತ್ರಷೆಯ
ಬರುವೆ ಆರ್ಭಟದಿಂದ ಹೋಗುವೆ ಚಿತ್ತಾರದೊಡನೆ
ಕಡಲಾಳದಿಂದ ಸಾಗಿ
ಗುಡ್ಡ ಬೆಟ್ಟಗಳ ಹಾದು
ಕಣಿವೆಗಳನಿಳಿದು
ಮರಗಳ ತಬ್ಬುವೆ ಹೂಗಳ ಚುಂಬಿಸುವೆ
ಆದರೂ ನಾನು ಏಕಾಂಗಿ ಸಂಚಾರಿ
Comments
Post a Comment